<iframe src="https://www.googletagmanager.com/ns.html?id=G-QW472M8VHS" height="0" width="0" style="display:none;visibility:hidden"></iframe>

Swaraj Tractors - M/S Bhavani Agro Engg. Services, Railway Station Area, vijayapura Tractor and Farm Equipment Showroom in Railway Station Area, vijayapura, karnataka

Swaraj Tractors - M/S Bhavani Agro Engg. Services Swaraj Tractors INR Swaraj Tractors - M/S Bhavani Agro Engg. Services
Sindagi Road Railway Station Area, vijayapura 586104

Sindagi Road, Near Railway Bridge, Railway Station Area, vijayapura, karnataka - 586104

69 Reviews (4.42) 694.42
★★★★★
★★★★★
08037907670
Open Now Closes at 9:00 PM
Drive Direction Showroom Locator

Request A Call Back

Swaraj Tractors - M/S Bhavani Agro Engg. Services Social Feeds in Railway Station Area, vijayapura

25ಎಚ್ ಪಿ (ಅಶ್ವಶಕ್ತಿ) ಸಾಮರ್ಥ್ಯ ವಿಭಾಗದಲ್ಲಿ "ಟಾರ್ಗೆಟ್ 625" ಹೊಸ ಟ್ರಾಕ್ಟರ್ ಪರಿಚಯಿಸಿದ ಸ್ವರಾಜ್ ಟ್ರಾಕ್ಟರ್ಸ್ : ಇದರೊಂದಿಗೆ ಗುರಿ ಶ್ರೇಣಿ ವಿಸ್ತರಣೆ

25ಎಚ್ ಪಿ ವಿಭಾಗವನ್ನು ಮರುವ್ಯಾಖ್ಯಾನಿಸುವಂತೆ ಬಹುಮುಖ ಸಾಮರ್ಥ್ಯ ಮತ್ತು ಅನುಕೂಲಕ್ಕಾಗಿ ವಿನ್ಯಾಸಗೊಳಿಸಲಾಗಿದೆ

ಮೊಹಾಲಿ, ಅಕ್ಟೋಬರ್ ಎಕ್ಸ್‌ಎಕ್ಸ್, 2024 : ಮಹೀಂದ್ರಾ ಸಮೂಹದ ಭಾಗವಾಗಿರುವ

ಮತ್ತು ಭಾರತದಲ್ಲಿ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಟ್ಯಾಕ್ಟ‌ರ್ ಬ್ರಾಂಡ್‌ಗಳಲ್ಲಿ ಒಂದಾಗಿರುವ స్పరాజా ట్రారేనోర్, "టాగి౯టో 625" ಹೊಸ ಟ್ರ್ಯಾಕ್ಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸುವುದರೊಂದಿಗೆ, ತನ್ನ ಜನಪ್ರಿಯ 'ಸ್ವರಾಜ್ ಟಾರ್ಗೆಟ್ ಶ್ರೇಣಿ'ಯನ್ನು ಮತ್ತಷ್ಟು ಬಲಪಡಿಸಿದೆ. ಹೊಸ ಟ್ರ್ಯಾಕ್ಟರ್ 4ಡಬ್ಲ್ಯುಡಿ (ವೀಲ್ ಡ್ರೈವ್) ಮತ್ತು 2 ಡಬ್ಲ್ಯುಡಿ (ವೀಲ್ ಡ್ರೈವ್) ರೂಪಾಂತರಗಳಲ್ಲಿ ಲಭ್ಯವಿದೆ. ಸ್ವರಾಜ್ ಟಾರ್ಗೆಟ್ 625 - ಚಿಕ್ಕದಾದ (ಕಾಂಪ್ಯಾಕ್ಟ್) ಮತ್ತು ಹಗುರವಾದ ಟ್ರಾಕ್ಟರ್ ವರ್ಗವನ್ನು ಮರುವ್ಯಾಖ್ಯಾನಿಸಲು ಸಿದ್ಧವಾಗಿದೆ. ಅದು ಸರಿಸಾಟಿಯಿಲ್ಲದ ಶಕ್ತಿ, ತಂತ್ರಜ್ಞಾನ ಮತ್ತು ಬಹುಮುಖ ಸಾಮರ್ಥ್ಯ ಹೊಂದಿದೆ.

"ಸ್ವರಾಜ್ ಟಾರ್ಗೆಟ್" ಶ್ರೇಣಿಯು ಚಿಕ್ಕದಾದ (ಕಾಂಪ್ಯಾಕ್ಟ್) ಮತ್ತು ಹಗುರವಾದ ಟ್ರ್ಯಾಕ್ಟರ್‌ಗಳಲ್ಲಿ ಹೊಸ ಮಾನದಂಡಗಳನ್ನು ಹೊಂದಿಸುವ ಮನ್ನಣೆ ಗಳಿಸುವುದನ್ನು ಮುಂದುವರೆಸಿದೆ. "ಸ್ವರಾಜ್ ಟಾರ್ಗೆಟ್ 625" ವಿಶೇಷವಾಗಿ ಅದರ 2ಡಬ್ಲ್ಯುಡಿ (ವೀಲ್ ಡ್ರೈವ್) ರೂಪಾಂತರವು, ಆಧುನಿಕ ಕೃಷಿ ತಂತ್ರಗಳನ್ನು ಅಳವಡಿಸಿಕೊಳ್ಳಲು ಉತ್ಸುಕರಾಗಿರುವ ರೈತರಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ. ಶಕ್ತಿಯುತ ಕಾರ್ಯಕ್ಷಮತೆ ಮತ್ತು ಹೆಚ್ಚುವರಿ ಕಾರ್ಯಾಚರಣೆ ಸೌಕರ್ಯಗಳನ್ನು ಒಳಗೊಂಡ ಮಿಶ್ರಣದೊಂದಿಗೆ ಈ ಟ್ರ್ಯಾಕ್ಟ‌ರ್, ಸುಧಾರಿತ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಬಯಸುವ ರೈತರಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ.

"ಸ್ವರಾಜ್ ಟಾರ್ಗೆಟ್ 625", ದೇಶೀಯ ಟ್ರಾಕ್ಟರ್ ಉದ್ಯಮದಲ್ಲಿ ಪ್ರವರ್ತಕ ಪರಿಚಯವಾಗಿದ್ದು, ಪ್ರಗತಿಪರ ರೈತರ ನಿರ್ದಿಷ್ಟ ಅಗತ್ಯಗಳನ್ನು ಪೂರೈಸುವಂತೆ ವಿನ್ಯಾಸಗೊಳಿಸಲಾಗಿದೆ. ಶಕ್ತಿ, ತಂತ್ರಜ್ಞಾನ ಮತ್ತು ಕುಶಲತೆಯ ಅಸಾಧಾರಣ ಸಂಯೋಜನೆಯೊಂದಿಗೆ ಈ ಟ್ರ್ಯಾಕ್ಟರ್, ಸಿಂಪಡಣೆ ಮತ್ತು ಬಹುಬೆಳೆ ಅಥವಾ ಸಮಗ್ರ ಕೃಷಿ ಕಾರ್ಯಾಚರಣೆ ಸೇರಿದಂತೆ ವ್ಯಾಪಕ ಶ್ರೇಣಿಯ ಕೃಷಿ ಕಾರ್ಯಗಳಿಗೆ ಅತ್ಯುತ್ತಮವಾಗಿದೆ. ಚಿಕ್ಕದಾದ ಗಾತ್ರ, ಆಧುನಿಕ ವಿನ್ಯಾಸ ಮತ್ತು ಉತ್ತಮ ದರ್ಜೆಯ ವೈಶಿಷ್ಟ್ಯಗಳು ಬೆಳೆ ಹಾನಿಯನ್ನು ಕಡಿಮೆ ಮಾಡುವ ಜತೆಗೆ, ಕೃಷಿ ಉತ್ಪಾದಕತೆ ಹೆಚ್ಚಿಸುವ ಸುಧಾರಿತ ಯಂತ್ರೋಪಕರಣಗಳನ್ನು ಹುಡುಕುವ ರೈತರಿಗೆ ಇದು ಆದರ್ಶ ಆಯ್ಕೆಯಾಗಿದೆ.

ಸ್ವರಾಜ್ ಟಾರ್ಗೆಟ್ ಶ್ರೇಣಿಯ ಕಿರಿದಾದ ಜಾಡು ಅಡ್ಡಗಲ ಮತ್ತು ಕಡಿಮೆ ತಿರುಗುವ ತ್ರಿಜ್ಯದೊಂದಿಗೆ ರೈತರು, ಬಿಗಿಯಾದ ಜಾಗಗಳಲ್ಲಿ ಟ್ರಾಕ್ಟರ್ ಅನ್ನು ಸಲೀಸಾಗಿ ನಡೆಸುವುದನ್ನು ಖಚಿತಪಡಿಸುತ್ತದೆ, ಇದು ಬೆಳೆಗಳ ಉತ್ಪಾದಕತೆ ಹೆಚ್ಚಿಸುತ್ತದೆ. ಅದರ ಇಂಧನ-ಸಮರ್ಥ ವಿನ್ಯಾಸ ಮತ್ತು ಸುಧಾರಿತ ತಂತ್ರಜ್ಞಾನದ ವೈಶಿಷ್ಟ್ಯಗಳು-ಸುಗಮವಾದ ಗೇರ್‌ಶಿಷ್ಟಗಳಿಗಾಗಿ ಸಂಯೋಜಿಸಿದ (ಸಿಂಕ್ರೋಮೆಶ್) ಗೇರ್‌ಬಾಕ್ಸ್ ಕಾರಿನಂತಹ ಸೌಕರ್ಯ ಮತ್ತು ನಿಯಂತ್ರಣವನ್ನು ನೀಡುತ್ತವೆ, ಒಟ್ಟಾರೆ ಇದು ಕೃಷಿ ಅನುಭವವನ್ನು ಹೆಚ್ಚಿಸುತ್ತವೆ.

ಟಾರ್ಗೆಟ್ 625ರ ಪ್ರಮುಖ ಲಕ್ಷಣಗಳು ಮತ್ತು ಪ್ರಯೋಜನಗಳು:

ಸರಿಸಾಟಿಯಿಲ್ಲದ ಶಕ್ತಿ ಮತ್ತು ಕಾರ್ಯಕ್ಷಮತೆ:

  • .ಶಕ್ತಿಯುತ ಡಿಐ ಎಂಜಿನ್ : ಪ್ರಭಾವಶಾಲಿ 83.1 ಎನ್‌ಎಂ ಟಾರ್ಕ್ ನೀಡುತ್ತದೆ. ಸವಾಲಿನ ಮಣ್ಣಿನ ಭೂಪ್ರದೇಶಗಳಲ್ಲೂ ಸಹ 600 ಲೀಟ‌ರ್ ವರೆಗಿನ ಟ್ರೇಲ್ಡ್ ಸ್ಟೇಯರ್‌ಗಳನ್ನು ಸಲೀಸಾಗಿ ನಿರ್ವಹಿಸಲು ಟ್ರಾಕ್ಟರ್ ಅನ್ನು ಸಕ್ರಿಯಗೊಳಿಸುತ್ತದೆ.
  • ಸರಿಹೊಂದಿಸಬಹುದಾದ ಫೆಕ್ಸಿ ಟ್ಯಾಕ್ ಅಡ್ಡಗಲ : ವಿವಿಧ ಬೆಳೆ ಅವಶ್ಯಕತೆಗಳಿಗೆ ಸರಿಹೊಂದುವಂತೆ 28, 32, ಅಥವಾ 36 ಇಂಚುಗಳ ಹೊಂದಾಣಿಕೆಯ ಆಯ್ಕೆಗಳೊಂದಿಗೆ ಅದರ ವರ್ಗದಲ್ಲಿ ಕಿರಿದಾದ ಸಂಚಾರ ಜಾಗವನ್ನು ನೀಡುತ್ತದೆ.
  • ಗರಿಷ್ಠ (ಮ್ಯಾಕ್ಸ್) ಎತ್ತುವ (ಲಿಫ್ಟ್) ಸಾಮರ್ಥ್ಯ: 980 ಕಿಲೋ ಗ್ರಾಂ ಫೋರ್ಸ್ (ಕೆಜಿಎಫ್) ಎತ್ತುವ ಸಾಮರ್ಥ್ಯ ಹೊಂದಿದೆ, ಇದು ಭಾರವಾದ ಉಪಕರಣಗಳನ್ನು ಸುಲಭವಾಗಿ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
  • ಎಡಿಡಿಸಿ ಹೈಡ್ರಾಲಿಕ್ಸ್: ಡಕ್ ಫೂಟ್ ಕಲಿವೇಟರ್‌ಗಳು, ಎಂಬಿ ನೇಗಿಲುಗಳು ಮತ್ತು ಇನ್ನೂ ಹೆಚ್ಚಿನ ಡ್ರಾಫ್ಟ್ ಇಂಪ್ಲಿಮೆಂಟ್ ಸಾಧನ ಅಥವಾ ಉಪಕರಣಗಳಿಗೆ ನಿಖರವಾದ ಆಳ ನಿಯಂತ್ರಣವನ್ನು ಖಚಿತಪಡಿಸುತ್ತದೆ.
  • ಅದರ ವರ್ಗದಲ್ಲಿ ಅತ್ಯಧಿಕ ಪಿಟಿಒ ಪವರ್: 14.09 ಕಿಲೋವ್ಯಾಟ್ (18.9 ಎಚ್ ಪಿ) ಪಿಟಿಒ (ಪವ‌ರ್ ಟೇಕ್-ಆಪ್) ಶಕ್ತಿ ಒದಗಿಸುತ್ತದೆ, ಟ್ರೇಲ್ಡ್ ಸ್ಟೇಯರ್‌ಗಳೊಂದಿಗೆ ಏಕರೂಪದ ಮಂಜಿನ ರೂಪದ ಸಿಂಪಡಣೆಯನ್ನು ಖಾತ್ರಿಗೊಳಿಸುತ್ತದೆ.

ಭವಿಷ್ಯ-ಸಿದ್ದ ತಂತ್ರಜ್ಞಾನ:

  • ಮ್ಯಾಕ್ಸ್-ಕೂಲ್ ರೇಡಿಯೇಟರ್: ಉನ್ನತ ಶಾಖ ಹರಡುವಿಕೆಗಾಗಿ 20% ದೊಡ್ಡ ವಿನ್ಯಾಸ ಹೊಂದಿದೆ, ವಿಸ್ತ್ರತ ಕಾರ್ಯಾಚರಣೆಗಳ ಸಮಯದಲ್ಲಿ ಅಧಿಕ ಬಿಸಿ ಆಗುವುದನ್ನು ತಡೆಯುತ್ತದೆ.
  • ಸ್ಥಿರ ಮೆಶ್ ಟ್ರಾನ್ಸ್ ಮಿಷನ್: ನಯವಾದ ಮತ್ತು ಸಲೀಸಾದ ಗೇರ್ ಶಿಫ್ಟಿಂಗ್ ಖಚಿತಪಡಿಸುತ್ತದೆ.
  • ಎಂಜಿನ್ ಕೀ ಸ್ಟಾಪ್: ಕೀಲಿಯೊಂದಿಗೆ ಅನುಕೂಲಕರ ಎಂಜಿನ್ ಆನ್/ಆಫ್ ನಿಯಂತ್ರಣ ನೀಡುತ್ತದೆ.
  • ಸಮತೋಲಿತ ಪವರ್ ಸ್ಟೀರಿಂಗ್: ಸಾಲು ಬೆಳೆ ಕ್ಷೇತ್ರಗಳಲ್ಲಿ ಆಗಾಗ್ಗೆ ತಿರುವುಗಳ ಸಮಯದಲ್ಲಿ ಆಯಾಸ ಕಡಿಮೆ ಮಾಡುತ್ತದೆ, ಆಪರೇಟರ್ ಸೌಕರ್ಯ ಹೆಚ್ಚಿಸುತ್ತದೆ.
  • ಸ್ಟೈಲಿಶ್ ಡಿಜಿಟಲ್ ಕ್ಲಸ್ಟರ್: ಕಡಿಮೆ ಬೆಳಕಿರುವ ಪರಿಸ್ಥಿತಿಗಳಲ್ಲೂ ಸಹ ಗೋಚರತೆ
  • ಮತ್ತು ಬಳಕೆಯ ಸುಲಭತೆ ಹೆಚ್ಚಿಸುತ್ತದೆ. 2ಡಬ್ಲ್ಯುಡಿ ಆಕ್ಸೆಲ್ ಆಯ್ಕೆ: ಟ್ರ್ಯಾಕ್ಟರ್‌ನ ಬಹುಮುಖ ಸಾಮರ್ಥ್ಯ ಮತ್ತು ಬಳಕೆಯ ವ್ಯಾಪ್ತಿ ವಿಸ್ತರಿಸುತ್ತದೆ.
  • ಡ್ಯುಯಲ್ ಪಿಟಿಒ: 540 ಮತ್ತು 540ಇ ಎಕಾನಮಿ ಪಿಟಿಒ ಮಾದರಿಗಳನ್ನು ಒಳಗೊಂಡಿದೆ. ಇದು ಪರ್ಯಾಯಕಗಳು ಮತ್ತು ನೀರಿನ ಪಂಪ್‌ಗಳಂತಹ ಹಗುರವಾದ ಉಪಕರಣಗಳನ್ನು ಬಳಸುವಾಗ ಇಂಧನ ಉಳಿತಾಯಕ್ಕೆ ಅನುವು ಮಾಡಿಕೊಡುತ್ತದೆ.

************